"ಮಾರ್ಕೆಟ್" ಎಂಬ ಶಬ್ದ "ಮಾರ್ಕಟಸ್" ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಅಂದರೆ "ವ್ಯಾಪಾರ ಮಾಡು" ಎಂದು. ಈ "ಮಾರ್ಕೆಟ್" ಎಂಬ ಶಬ್ದವನ್ನು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆಯಾಗಿ ಬಳಸಲಾಗುತ್ತದೆ. ಸಾಮಾನ್ಯ ಅರ್ಥದಲ್ಲಿ "ಮಾರ್ಕೆಟ್" ಅಥವಾ ಮಾರುಕಟ್ಟೆಯೆಂದರೆ ಮಾರುವವರು ಮತ್ತು ಕೊಳ್ಳವವರು ಪರಸ್ಪರ ಭೇಟಿಯಾಗಿ,ಮಾರುವುದು ಮತ್ತು ಕೊಳ್ಳವ ಸ್ಥಳ. ಪ್ರೊ.ಫಿಲಿಪ್ ಕೋಟ್ಲರ್:"ಒಂದು ಸಮರ್ಥ ವಿನಿಮಯಕ್ಕೆ ಒಂದು ಪ್ರದೇಶ ಅಥವಾ ವಾತಾವರಣವೇ ಮಾರುಕಟ್ಟೆ." ಕ್ಲಾರ್ಕ್ ಮತ್ತು ಕ್ಲಾರ್ಕ್:"ಮಾರುಕಟ್ಟೆ ಒಂದು ನಿರ್ದಿಷ್ಟ ಉತ್ಪನ್ನದ ಕಾರ್ಯಾಚರಣೆಗೆ ಹಕ್ಕನ್ನು ವಿನಿಮಯ ಮಾಡಲು ಮತ್ತು ಯಾವುದರಿಂದ ಯಾವುದರ ಕಡೆಗೆ ವಾಸ್ತವ ಸರಕುಗಳು ಸಾಗುವುದಕ್ಕೆ ದಾರಿ ಮಾಡುವುದೋ ಅಂಥ ಪ್ರದೇಶ." == ಮಾರುಕಟ್ಟೆಗಳ ವರ್ಗೀಕರಣ == ವಿವಿಧ ದೃಷ್ಟಿಕೋನಗಳ ಆಧಾರದ ಮೇಲೆ ಮಾರುಕಟ್ಟೆಯನ್ನು ಹಲವು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿದೆ. === ಭೌಗೋಳಿಕ ಪ್ರದೇಶದ ಅನುಸಾರ === ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಮಾರುಕಟ್ಟೆಗಳನ್ನು ನಾಲ್ಕು ಬಗೆಯಾಗಿ ವರ್ಗೀಕರಿಸಬಹುದು.ಅವು ಸ್ಥಳೀಯ ಮಾರುಕಟ್ಟೆ ಪ್ರಾದೇಶಿಕ ಮಾರುಕಟ್ಟೆ ರಾಷ್ಟ್ರೀಯ ಮಾರುಕಟ್ಟೆ ವಿಶ್ವ ಅಥವಾ ರಾಷ್ಟ್ರೀಯ ಮಾರುಕಟ್ಟೆ === ಮಾರಾಟಗಾರರ ಸ್ಥಾನದ ಆಧಾರದ ಮೇಲೆ === ಮಾರುಕಟ್ಟೆಗಳಲ್ಲಿ ಮಾರಾಟಗಾರರ ಸ್ಥಾನದ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು ಪ್ರಾಥಮಿಕ ಮಾರುಕಟ್ಟೆ ದ್ವಿತೀಯ ಮಾರುಕಟ್ಟೆ ಅಂತಿಮ ಮಾರುಕಟ್ಟೆ === ಅವಧಿಯ ಆಧಾರದ ಮೇಲೆ === ಅವಧಿಯ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು ಅತ್ಯಲ್ಪ ಅವಧಿಯ ಮಾರುಕಟ್ಟೆ ಅಲ್ಪಾವಧಿಯ ಮಾರುಕಟ್ಟೆ ದೀರ್ಘಾವಧಿಯ ಮಾರುಕಟ್ಟೆ === ವ್ಯವಹಾರದ ಗಾತ್ರ ಅಥವಾ ಪ್ರಮಾಣದ ಮೇಲೆ === ವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು ಸಗಟು ಮಾರುಕಟ್ಟೆ ಚಿಲ್ಲರೆ ಮಾರುಕಟ್ಟೆ === ವಹಿವಾಟಿನ ಲಕ್ಷಣದ ಆಧಾರದ ಮೇಲೆ === ವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು ಸ್ಥಾನಿಕ ಮಾರುಕಟ್ಟೆ ಭವಿಷ್ಯದ ಮಾರುಕಟ್ಟೆ === ವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ === ವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು ಸರಕಿನ ಮಾರುಕಟ್ಟೆ ಬಂಡವಾಳದ ಮಾರುಕಟ್ಟೆ === ನಿಯಂತ್ರಣದ ಆಧಾರದ ಮೇಲೆ === ನಿಯಂತ್ರಣದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು ನಿಯಂತ್ರಿತ ಮಾರುಕಟ್ಟೆ ಅನಿಯಂತ್ರಿತ ಅಥವಾ ಮುಕ್ತ ಮಾರುಕಟ್ಟೆ === ಆರ್ಥಿಕತೆಯ ಆಧಾರದ ಮೇಲೆ === ಆರ್ಥಿಕತೆಯ ಆಧಾರದ ಮೇಲೆ ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು ಸಮರ್ಪಕ ಮಾರುಕಟ್ಟೆ ಅಸಮರ್ಪಕ ಮಾರುಕಟ್ಟೆ ಏಕಸ್ವಾಮ್ಯ ಮಾರುಕಟ್ಟೆ == ಉಲ್ಲೇಖ ==